+91 9483 81 2877
Support Center
“ಪ್ರೀತಿ ಹುಟ್ಟೋಕೆ ಕಾರಣ ಬೇಕಾಗಲ್ಲಾ, ಆದರೆ ಪ್ರೀತಿಸಿದವರಿಂದ ದೂರ ಹೋಗಬೇಕಾದರೆ ಕಾರಣಗಳಿಗೆ ಮೀತಿಯೇ ಇರೋದಿಲ್ಲ”. “ಹೇಳಿ ಹೋಗು ಕಾರಣ” ಇದೊಂದು ಭಾವ ಪರವಶದಿಂದ ಕೂಡಿದ ಪ್ರೇಮ ಕಾದಂಬರಿ.
“ಮೂಕಜ್ಜಿಯ ಕನಸುಗಳು” ಎಂಬ ಕಾದಂಬರಿಯನ್ನು ಜ್ಞಾನಪೀಠ ಪ್ರಶಸ್ತಿ ವಿಜೇತ ಡಾ. ಕೆ. ಶಿವರಾಮ ಕಾರಂತ್ ಅವರು ರಚಿಸಿದ್ದಾರೆ. ಈ ಕಾದಂಬರಿಯಲ್ಲಿ ಮೂಕಜ್ಜಿ ಎಂಬ ವೃದ್ಧ ಮಹಿಳೆ ತನ್ನ ಅದ್ಭುತ ಸ್ವಪ್ನಶಕ್ತಿಯ ಮೂಲಕ ಜಗತ್ತಿನ ಹಲವಾರು ಚಿಂತನೆಗಳು, ಧರ್ಮ, ಸಂಪ್ರದಾಯ ಮತ್ತು ಮೌಲ್ಯಗಳನ್ನು ಹುಡುಕುತ್ತಿರುವ ಕಥಾವಸ್ತು ಇದೆ. ಆಕೆಯ ಮೊಮ್ಮಗ ಸುಬ್ಬರಾಯನೊಂದಿಗೆ ನಡೆಸುವ ಸಂಭಾಷಣೆಯ ಮೂಲಕ, ಕೃತಿಯು ದ್ವಂದ್ವ ಭಾವನೆಗಳು ಮತ್ತು ಮಾನವ ಚಿಂತನೆಯ ಪ್ರಗತಿಯನ್ನು ತೆರೆಮೆಯ ಮೇಲೆ ತರುತ್ತದೆ. ಕನ್ನಡ ಸಾಹಿತ್ಯದಲ್ಲಿ ಈ ಕೃತಿಯನ್ನು ಒಂದು ಮಹತ್ವದ ಕಾದಂಬರಿಯಾಗಿ ಪರಿಗಣಿಸಲಾಗುತ್ತದೆ.
ಕವಿಗಳೆಂದು ಜನಪ್ರಿಯರಾಗಿರುವ ಕುವೆಂಪು ಅವರು ಎರಡು ಕಾದಂಬರಿಗಳನ್ನೂ ರಚಿಸಿದ್ದಾರೆ. ಅವರ ಮೊದಲ ಕಾದಂಬರಿ ಕಾನೂರು ಹೆಗ್ಗಡತಿ. ಅದರ ನಂತರ ಪ್ರಕಟವಾದ ಕಾದಂಬರಿಯೇ ಮಲೆಗಳಲ್ಲಿ ಮದುಮಗಳು.