Availability: Out of Stock

Tughalak

Author: Girish Karnad
SKU: 52413704

130.00

ಹತ್ತು ರೀತಿಯ ವೇಷವನ್ನು ತೊಟ್ಟರೂ ತಮ್ಮ ವ್ಯಕ್ತಿತ್ವವನ್ನು ತೆರೆದು ಬಿಸಿಲಿಗೆ ಒಣಗಹಾಕುವ ಪಾತ್ರಗಳು, ಆರಮನೆ, ರಾಜಬೀದಿ, ಮಸೀದೆ, ಕೋಟೆಯ ಬುರುಜು ಹೀಗೆ ಬೇಕಾದಲ್ಲಿ ಪ್ರತ್ಯಕ್ಷವಾಗುವ ಸನ್ನಿವೇಶಗಳು, ಇವೆರಡನ್ನೂ ಬೆಸೆದಂತಿರುವ ನಾಟ್ಯಧ್ವನಿ, ದೃಶ್ಯಕಾವ್ಯದ ಭಾಷೆ-ಹೀಗೆ ನಾಟಕದ ರಚನಾಕೌಶಲ ಅದ್ಭುತವಾಗಿದೆ.

Out of stock

Description

ಇದು ಗಿರೀಶ ಕಾರ್ನಾಡರ ಎರಡನೆಯ ನಾಟಕ. ಈ ನಾಟಕದ ಕಥಾವಸ್ತು ಐತಿಹಾಸಿಕವಾಗಿದ್ದರೂ ಇದರ ಉದ್ದೇಶ ಇತಿಹಾಸದ ಚಿತ್ರಣವಲ್ಲ, ತುಘಲಕ್ ವಂಶದ ಹುಚ್ಚ ಮುಹಮ್ಮದನ ಅರಾಜಕತೆಯ ಆಳ್ವಿಕೆಯೇ ನಾಟಕದ ಕಾರ್ಯಪರಂಪರೆಯಾಗಿದ್ದರೂ ವಿವೇಕ-ಅವಿವೇಕಗಳ ದ್ವಂದ್ವವನ್ನು ನಾಟಕೀಯವಾಗಿ ತೋರಿಸುವ ಕೃತಿಯಲ್ಲ. ಮನುಷ್ಯ ದೇವತ್ವದ ಕನಸನ್ನು ಕಾಣುವ ವಶುವಾಗಿರುವದೇ ಇಲ್ಲಿಯ ಮೂಲಭೂತವಾದ ಸಮಸ್ಯೆಯಾಗಿದೆ. ಈ ಸಮಸ್ಯೆ ಹುಟ್ಟಿಸುವ ಅನೇಕ ಮಾನವೀಯ ಅನರ್ಥಗಳಿಗೆ ಮುಹಮ್ಮದ ಪ್ರಳಯ ಕೇ೦ದ್ರವಾಗಿದ್ದಾನೆ. ಕಾಯದೆಗಳಿಗನುಸಾರವಾಗಿ ವೇಷ ಬದಲಿಸುವ ಬೀದಿಗಳರು, ಪ್ರಾರ್ಥನೆಯ ಹೊತ್ತಿನಲ್ಲಿ ಕೊಲೆ ರಾಜಕಾರಣವನ್ನು ದೇವರ ಮಾಡುವ ಕಾರ್ಯವೆಂದು ಸರದಾರರು. ಭ್ರಮಿಸಿದ ಧರ್ಮಗುರುಗಳು, ಇಂಥ ವ್ಯಕ್ತಿಗಳ ದುರ್ದೈವಕ್ಕೆ ಸೂತ್ರಧಾರನಾದ ಮುಹಮ್ಮದ-ಹೀಗೆ ನಾಟಕದ ಮಾನುಷ ಪ್ರಪಂಚ ಜಟಿಲವಾಗಿದೆ. ವೇಷಾಂತರ, ಸ್ಥಳಾಂತರ, ಮತಾಂತರ-ಏನಾದರೂ ಮುಹಮ್ಮದನಿಗೆ ಆಗುವುದು-ಮಾಂಸ ಭಕ್ಷವಾಗಿರುವ ತನ್ನ ಆತ್ಮದ ದರ್ಶನ. ಕಾವ್ಯ, ಧರ್ಮ, ರಾಜಕಾರಣ ಮೊದಲಾದ ತನ್ನ ಸಂಸ್ಕಾರಗಳಿಗೆ ತಾನೇ ಪರಕೀಯನಾಗಿ, ದಿಲ್ಲಿಯಿಂದ ದೌಲತ್ತಾಬಾದಿನವರೆಗೆ ತನ್ನ ರಾಜ್ಯವನ್ನು, ಪ್ರಜೆಗಳನ್ನೂ ನಡೆಸಿಕೊಂಡು ಹೋದ ಆರಸ, ‘ಆತ್ಮ-ಹತ್ಯೆ’ಯನ್ನು ಮಾಡಿಕೊಂಡೂ ಜೀವಂತವಾಗಿ ಉಳಿಯುತ್ತಾನೆ. ಇದೇ ಇಲ್ಲಿಯ ಹೊಸ

Reviews

There are no reviews yet.

Be the first to review “Tughalak”

Your email address will not be published. Required fields are marked *