‘ಲೆಟ್ಸ್ ಬ್ರೇಕಪ್’ ಎನ್ನುವ ಶೀರ್ಷಿಕೆಯನ್ನು ನೋಡಿ ಪುಸ್ತಕವನ್ನು ತೆರೆಯುವಾಗ ‘ಹೆಚ್ಚಿನ ಕಥೆಗಳು ಪ್ರೀತಿಗೆ ಸಂಬಂಧಪಟ್ಟವೇ ಆಗಿರಬಹುದೇನೋ’ ಎಂದುಕೊಂಡರೆ ಅದು ಸುಳ್ಳಾಗುತ್ತದೆ. ಅದು ನನ್ನ ಗೆಲುವೋ ಸೋಲೋ ಗೊತ್ತಿಲ್ಲ. ಬ್ರೇಕಪ್ ಎನ್ನುವುದು ಇಬ್ಬರು ವ್ಯಕ್ತಿಗಳ ಮಧ್ಯೆಯೇ ಸಂಭವಿಸಬೇಕೆಂದೇನಿಲ್ಲ. ನಾವು ಮತ್ತು ನಮ್ಮ ನಂಬಿಕೆಯ ಮಧ್ಯೆಯೂ ಸಂಭವಿಸಬಹುದು. ಸತತವಾಗಿ ನಮ್ಮ ಸುತ್ತ ನಾವೇ ಹಾಕಿಕೊಂಡಿರುವ ಬೇಲಿಗಳ ಜೊತೆ ಬ್ರೇಕಪ್ ಮಾಡಿಕೊಳ್ಳುತ್ತಾ ಸಾಗುವುದೇ ಜೀವನ ಎನ್ನುವುದು ಈ ಶೀರ್ಷಿಕೆಯ ಒಳಾರ್ಥ ಎಂದುಕೊಳ್ಳಬಹುದು.