1936 ರಲ್ಲಿ ಮೊದಲ ಮುದ್ರಣ ಕಂಡ ಕುವೆಂಪು ಅವರ ಮೊದಲ ಕಾದಂಬರಿ. 2011 ರಲ್ಲಿ ಹದಿನೆಂಟನೆಯ ಮುದ್ರಣ ಕಂಡಿದೆ.
ಕುವೆಂಪು ಅವರು ಅರಿಕೆ ಮಾಡಿದಂತೆ ಕೃತಿ ರಚನೆಯಂತೆಯೆ ಕೃತಿಯ ರಸಾಸ್ವಾದನೆಯೂ ಒಂದು ಸೃಷ್ಟಿಕಾರ್ಯ . ಸೃಷ್ಟಿಕಾರ್ಯವಲ್ಲದ ಸರ್ವ ಕರ್ಮಗಳೂ ನೀರಸವಾಗುತ್ತವೆ.
ಅವರು ಹೇಳಿದಂತೆ ಕೋಲಾಹಲದಲ್ಲಿ ಓದದೇ ಸಾವಧಾನವಾಗಿ ಸಚಿತ್ರವಾಗಿ ಸಜೀವವಾಗಿ ಓದಿಯೇ ಸವಿಯಬೇಕಾದ ಸುಮಾರು 590 ಪುಟಗಳ ದೀರ್ಘ ಕಾದಂಬರಿ ಇದು.