Description
‘ಅಂಬೇಡ್ಕರ್ ಜಗತ್ತು’ ಬಾಬಾಸಾಹೇಬ್ ಮತ್ತು ದಲಿತ ಚಳವಳಿ ರೂಪುಗೊಂಡ ಕಥನ ಎಲಿನಾರ್ ಝೆಲಿಯೇಟ್ ಅವರ ‘Ambedkar’s World: The making of Babasaheb Ambedkar and the Dalit movement’ ಕೃತಿಯ ಕನ್ನಡಾನುವಾದ. ಲೇಖಕ ವಿಕಾಸ್ ಆರ್. ಮೌರ್ಯ ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಕೃತಿಗೆ ಹಿರಿಯ ವಿಮರ್ಶಕ ಡಾ. ರಾಜೇಂದ್ರ ಚೆನ್ನಿ ಅವರ ಬೆನ್ನುಡಿ ಬರಹವಿದೆ. ಕೃತಿಯ ಕುರಿತು ಬರೆಯುತ್ತಾ ‘1960 ರ ದಶಕದಲ್ಲಿ ಸಂಶೋಧನಾ ಪ್ರಬಂಧವಾಗಿ ಎಲೀನರ್ ಝೆಲಿಯೇಟ್ ಅವರು ಬರೆದ ಈ ಕೃತಿಯು ಹಲವು ಬಗೆಯಲ್ಲಿ ದಲಿತ ಅಧ್ಯಯನಗಳ ಬುನಾದಿಯಾಗಿದೆ. ಮಹಾರಾಷ್ಟ್ರದ ಮಹಾರ್ ಜನಾಂಗವು ಶಿಕ್ಷಣ, ಸಂಘಟನೆ ಹಾಗೂ ಹೋರಾಟಗಳ ಮೂಲತ ತನ್ನನ್ನು ಒಂದು ರಾಜಕೀಯ ಶಕ್ತಿಯಾಗಿ ರೂಪಿಸಿಕೊಂಡ ಕಥನದ ಮೂಲಕ ಅಂಬೇಡ್ಕರ್ ಅವರ ಅಪ್ರತಿಮ ರಾಜಕೀಯ ಚಿಂತನೆ ಹಾಗೂ ಕ್ರಿಯಾಶೀಲತೆಯ ವಸ್ತುನಿಷ್ಠ ಅಧ್ಯಯನವಾಗಿದೆ. ರಾಜಕೀಯ ಚರಿತ್ರೆ ಹಾಗೂ ವಿಶ್ಲೇಷಣೆಯಲ್ಲಿ ಇದೊಂದು ಮೈಲಿಗಲ್ಲು’ ಎಂದಿದ್ದಾರೆ.
Reviews
There are no reviews yet.