Availability: In Stock

Janapriya Valmiki Ramayana

Author: Kuvempu
SKU: gbk-235

365.00

Janapriya Valmiki Ramayana by Kuvempu

ಕುವೆಂಪುರವರ ಜನಪ್ರಿಯ ವಾಲ್ಮೀಕಿ ರಾಮಾಯಣ

 

 

Description

ನಮ್ಮ ದೇಶದ ಸಾಹಿತ್ಯಕ್ಕೆ ರಾಮಾಯಣ, ಮಹಾಭಾರತ ಮೂಲದ್ರವ್ಯ ಎಂದು ಹೇಳಬಹುದು. ನಮ್ಮ ದೇಶದ ಯಾವುದೇ ಊರಿಗೆ ಹೋದರೂ, ‘ರಾಮ ಇಲ್ಲಿ ಕೂತಿದ್ದ:, ‘ಹನುಮಂತ ಇಲ್ಲಿ ವಿಶ್ರಮಿಸಿದ್ದ’, ‘ಲಕ್ಷಣ ಇಲ್ಲಿ ಸ್ನಾನ ಮಾಡಿದ್ದ’, ಈ ರೀತಿಯ ಹಲವು ಕತೆಗಳಿರುತ್ತವೆ. ಎಲ್ಲರೊಳಗೂ ಆ ಪಾತ್ರಗಳ ಬೆರೆತುಬಿಟ್ಟಿವೆ. ಅವುಗಳಲ್ಲಿನ ಪಾತ್ರಗಳನ್ನು ಪ್ರತಿದಿನ ನಮಗೆ ಗೊತ್ತಿಲ್ಲದೆ ನೆನೆಯುತ್ತಿರುತ್ತೆವೆ. ಇದೇನಿದು ‘ಹನುಮಂತನ ಬಾಲ ಇದ್ದ ಹಾಗೇ ಇದೆ’, ‘ನಿಂದೊಳ್ಳೆ ರಾಮಾಯಣ ಆಯ್ತು’, ‘ನೀನ್ ಬಿಡಪ್ಪ ಕೃಷ್ಣ ಪರಮಾತ್ಮ’, ‘ಶಬರಿ ಕಾದಂಗೆ ಕಾದನಲ್ಲೊ’ ಹೀಗೆ ಒಂದಿಲ್ಲೊಂದು ಕಡೆ ನಮಗರಿವಿಲ್ಲದಂತೆ ಆ ಪಾತ್ರಗಳನ್ನು ಸ್ಮರಿಸುತ್ತೆವೆ. ಚಿಕ್ಕಂದಿನಿಂದಲೂ ಈ ಮಹಾಕಾವ್ಯಗಳ ಕಥೆಗಳೆಂದರೆ ಒಂದು ರೀತಿಯ ಆಕರ್ಷಣೆ ನನಗೆ, ಟಿವಿಯಲ್ಲಿ ಬರುತ್ತಿದ್ದ ಧಾರಾವಾಹಿಗಳನ್ನು ಬೆರಗಾಗಿ ನೋಡುತ್ತಿದ್ದೆ. ಪತ್ರಿಕೆಗಳಲ್ಲಿ ಬರುವ ಈ ಕೃತಿಗಳನ್ನಾಧರಿಸಿದ ಕಿರುಗತೆಗಳನ್ನು ಆಸಕ್ತಿಯಿಂದ ಓದುತ್ತಿದ್ದೆ, ‘ಸಂಪೂರ್ಣ ರಾಮಯಣ’, ‘ಸಂಪೂರ್ಣ ಮಹಾಭಾರತ’ ಎಂಬ ಕೆಲ ಪುಸ್ತಕಗಳನ್ನು ಹೈಸ್ಕೂಲಿನಲ್ಲಿ ಓದಿದ್ದೆ, ಇತ್ತೀಚೆಗಂತೂ ತುಂಬಾ ವಿವಾದಗಳು, ಮತದ್ವೇಷಗಳನ್ನು ಕಂಡು ಮತ್ತೊಮ್ಮೆ ರಾಮಾಯಣವನ್ನು ಓದಬೇಕೆನಿಸಿತು, ಆದರೆ ಕುಮಾರವ್ಯಾಸ ಹೇಳುವಂತೆ ‘ತಿಣುಕಿದನು ಫಣಿರಾಯ’ ಎನ್ನುವಷ್ಟು ರಾಮಯಣಾಧರಿತ ಕೃತಿಗಳಿವೆ, ಒಂದೊಂದರಲ್ಲಿ ಒಂದೊಂದು ಪಾತ್ರಗಳನ್ನು ವಿಜೃಂಬಿಸಲಾಗಿದೆ. ಆದ್ದರಿಂದ ಮೂಲ ಗ್ರಂಥವಾದ ವಾಲ್ಮೀಕಿ ರಾಮಾಯಣ ಓದಬೇಕೆಂಬ ತುಡಿತ ಹುಟ್ಟಿತು, ಆದರೆ ನನಗೋ ಸಂಸ್ಕೃತದ ಗಂಧ ಗಾಳಿಯು ಗೊತ್ತಿಲ್ಲ. ಎರಡು ವಾರದ ಹಿಂದೆ ಹುಬ್ಬಳ್ಳಿಯ ಸಪ್ನ ಪುಸ್ತಕಾಲಯದಲ್ಲಿ ಯಾವುದೋ ಪುಸ್ತಕ ಹುಡುಕುತ್ತಿದ್ದಾಗ, ‘ಜನಪ್ರಿಯ ವಾಲ್ಮೀಕಿ ರಾಮಾಯಣ’ ಎಂಬ ಪುಸ್ತಕ ನೋಡಿ, ಅದೂ ಕುವೆಂಪು ಅವರ ಅನುವಾದವೆಂದು, ಗದ್ಯರೂಪದಲ್ಲಿದೆಯೆಂದು ತಿಳಿದು ಹರ್ಷಿತನಾಗಿ ತೆಗೆದುಕೊಂಡು ಬಂದೆ. ಪ್ರತಿಯೊಂದೂ ಪಾತ್ರಗಳ ಸೃಷ್ಟಿ ಅದ್ಬುತ, ಅರಣ್ಯಕಾಂಡದಲ್ಲಿ ವಿವಿಧ ವೃಕ್ಷ, ಹೂಬಳ್ಳಿ ಸಸ್ಯಗಳ ವರ್ಣನೆ ಸುಂದರವಾಗಿದೆ. *ಮೂಲ ಕೃತಿಯ ನಂತರ ಬಂದ ರಾಮಾಯಣ ಕೃತಿಗಳಲ್ಲಿ ಅನೇಕ ಬದಲಾವಣೆಗಳಿವೆ. ಅಲಂಕಾರಿಕ ಅಂಶಗಳಿವೆ. ಉದಾಹರಣೆಗೆ ಇಲ್ಲಿ ಲಕ್ಷಣ ರೇಖೆ ಎಂಬ ಕಲ್ಪನೆಯೆ ಇಲ್ಲ, ಅದೇಲ್ಲಾ ವಾಲ್ಮೀಕಿಯ ನಂತರದ ಕವಿಗಳ ಸೃಷ್ಟಿ. ಅದೇ ರೀತಿ ಇಲ್ಲಿ ಕಥೆ ರಾಮನ ಪಟ್ಟಾಭಿಷೇಕದೊಂದಿಗೆ ಮುಗಿಯುತ್ತದೆ. ಅಂದರೆ ಸೀತಾ ವನವಾಸ, ಲವ-ಕುಶರ ಜನನ, ಅಶ್ವಮೇಧಗಳೆಲ್ಲಾ ವಾಲ್ಮೀಕಿ ರಾಮಾಯಣದಲ್ಲಿ ಇಲ್ಲ. ಎಲ್ಲರೂ ಓದಲೇಬೇಕಾದ ಪುಸ್ತಕವಿದು, ಹೇಗೆ ಬಾಳಬೇಕೆಂಬುದರ ಕೈಪಿಡಿಯಿದು ಎಂದರೆ ತಪ್ಪಿಲ್ಲ.

Reviews

There are no reviews yet.

Be the first to review “Janapriya Valmiki Ramayana”

Your email address will not be published. Required fields are marked *