Description
ಕಾದಂಬರಿಯಲ್ಲಿ ಲೇಖಕರು ಎರಡು ಮಹತ್ವದ ಮಜಲುಗಳನ್ನು ದಾಟಿದ್ದಾರೆ. ಒಂದು, ನಮಗೆ ಈವರೆಗೆ ಗೊತ್ತಿದ್ದ ಶರಾವತಿಗಿಂತ ಭಿನ್ನವಾದ ಶರಾವತಿಯನ್ನು ತೋರಿಸಿಕೊಟ್ಟಿದ್ದು, ಎರಡು, ಶರಾವತಿಯ ಪರಿಸರದ ಜೊತೆಗೇ ಬದುಕನ್ನು ಹೆಣೆದದ್ದು. ಇವೆರಡೂ ಅವರನ್ನು ವಿಶಿಷ್ಟವಾದ ಕಥನಕಾರರನ್ನಾಗಿ ಮಾಡಿದೆ. ಇಡೀ ಕತೆಯಲ್ಲಿ ಮನೋಲಹರಿಯಷ್ಟೇ ಗಾಢವಾಗಿ ವ್ಯಾವಹಾರಿಕ ವಿವರಗಳೂ ಬರುತ್ತದೆ. ಆ ವಿವರಗಳ ಒಳಗೆ ಈ ವಿವರಗಳು ಸೇರಿಕೊಳ್ಳುವ ಬಗೆ ಸೊಗಸಾಗಿದೆ. ಇಂಥ ಕತೆಗಳು ಕನ್ನಡದಲ್ಲಿ ಅಪರೂಪ, ಇಂಗ್ಲಿಷಿನಲ್ಲಿ ಅನೇಕರು ಹೀಗೆ ವಾಸ್ತವ ಮತ್ತು ಕಲ್ಪನೆಯನ್ನು ಬೆಳೆಯುವ ಕೆಲಸ ಮಾಡಿದ್ದಾರೆ. ಇದು ಒಂದು ರೀತಿಯಲ್ಲಿ ಕಥಾಸಾಕ್ಷ್ಯಚಿತ್ರದಂತಿದೆ.
Reviews
There are no reviews yet.