ಜೊತೆಗೆ ವ್ಯಕ್ತಿ ಕೇಂದ್ರಿತ ನಾಯಕ ಆರಾಧನೆಯೆ ಮುಖ್ಯವಾದ ಮಾದರಿಯಾಗಿದ್ದ ಕಾಲದಲ್ಲಿ ಎಲೀನರ್ ಜಾತಿವ್ಯವಸ್ಥೆ ಹಾಗೂ ಅಸ್ಪುೃಶ್ಯತೆಗಳ ತೀವ್ರ ಅಸಮಾನತೆಯ ಸಮಾಜವೊಂದರಲ್ಲಿ ವಸಾಹತುಶಾಹಿ, ಆಧುನಿಕತೆ, ನಗರೀಕರಣ ಇವುಗಳ ಪ್ರಭಾವದಲ್ಲಿ ವಿಶಾಲ ಅರ್ಥದ ರಾಜಕೀಯ ಹೋರಾಟವೊಂದರ ಭಾಗವಾಗಿ ಒಂದು ಸಮುದಾಯವು ಹೊಂದುವ ಪರಿವರ್ತನೆಯನ್ನು ದಾಖಲಿಸುತ್ತಾರೆ. ಹೀಗಾಗಿ ಇದು ಒಂದು ಯುಗ ಹಾಗೂ ಯುಗಧರ್ಮದ ಚರಿತ್ರೆಯೂ ಆಗಿದೆ. ಇದರಿಂದಾಗಿ ಅಂಬೇಡ್ಕರ್ ಅವರ ಚಿಂತನೆ ಹಾಗೂ ಕ್ರಿಯೆಗಳನ್ನು ಚರಿತ್ರೆಯ ಸಂದರ್ಭದಲ್ಲಿಟ್ಟು ಅರ್ಥಮಾಡಿಕೊಳ್ಳುವುದು ಸಾಧ್ಯವಾಗುತ್ತದೆ.