Description
ʼಕುಲುಮೆʼ ಕಾಲಗತಿಯನ್ನು ಅನುಸರಿಸಿಲ್ಲ. ಸಂದರ್ಭಕ್ಕೆ ಅನುಸಾರವಾಗಿ ಪ್ರತ್ಯೇಕ ಅಧ್ಯಾಯಗಳಲ್ಲಿ ನೆನಪುಗಳನ್ನು ಜೋಡಿಸಲಾಗಿದೆ. ರಹಮತ್ ತರೀಕೆರೆಯವರು ಒಳ್ಳೆಯ ಪ್ರಬಂಧಕಾರರೂ ಆಗಿರುವುದರಿಂದ ಬಾಳ ಚಿತ್ರಗಳು ಪ್ರಬಂಧದ ಮಾದರಿಯಲ್ಲಿವೆ. ಪತ್ರಿಕೆಯೊಂದರಲ್ಲಿ ಪ್ರಕಟವಾಗುತಿದ್ದ ಕಾರಣಕ್ಕೋ ಏನೋ ರಮ್ಯವಾಗಿ, ರಂಜಕವಾಗಿ ಬರೆದಂತಿದೆ. ನೋವಿನ ಘಟನೆಗಳು ನಲಿವಿಗೆ ಸಮೀಪ;ಜಗಳದಲ್ಲಿ ವಿನೋದ. ಅಕ್ಕ- ತಂಗಿಯರ ಕಲಹ, ಗಂಡ-ಹೆಂಡತಿಯ ಕೋಳಿ ಜಗಳಗಳಲ್ಲಿ ಉತ್ಪ್ರೇಕ್ಷೆಯಿದೆ. ತಮ್ಮನ ಮೇಲಿನ ಒಲವಿನಲ್ಲೂ ಉದ್ದೇಶಿತ ಹಾಸ್ಯ ಎದ್ದು ಕಾಣುತ್ತದೆ.
Reviews
There are no reviews yet.