Availability: In Stock

Kaju Biscuit

125.00

ಇದು ಕಿರಣ್‌ಕುಮಾರ್ ಅವರ ಮೊದಲ ಕಥಾಸಂಕಲನ. ಹನ್ನೆರಡು ಕಥೆಗಳ ಈ ಜಗತ್ತಿನಲ್ಲಿ ಮಹಾನಗರದಲ್ಲಿ ಬದುಕುತ್ತಿರುವ ಮಧ್ಯಮ-ಮೇಲ್ಮಧ್ಯಮ ವರ್ಗದ ಬದುಕಿನ ಹಲವು ಮಗ್ಗಲುಗಳು ಅನಾವರಣಗೊಂಡಿವೆ.

Categories: ,

Description

ಇಲ್ಲಿನ ಬಹುತೇಕ ಕಥೆಗಳಲ್ಲಿ ಪಾತ್ರಗಳು ಬದುಕುತ್ತಿರುವುದು ನಗರದಲ್ಲಾದರೂ ಅವುಗಳ ಸ್ಮೃತಿಬೇರುಗಳು ಇರುವುದು ಊರುಗಳಲ್ಲಿ. ದಾವಣಗೆರೆಯವರನ್ನು ಹುಡುಕುವುದನ್ನು ವ್ಯಸನವಾಗಿಸಿಕೊಂಡಿರುವ ವೃದ್ಧ ಗೋಪಾಲಯ್ಯನಿಂದ ಹಿಡಿದು ‘ಇಪ್ಪತ್ತೊಂದನೇ ಕ್ರೋಮೊಸೋಮು’ ಕಥೆಯ ಶೇಖರ ಮತ್ತು ಪ್ರಿಯದರ್ಶಿನಿ ಅವರವರೆಗೂ ಇದು ನಿಜ. ಇಲ್ಲಿ ಹಳ್ಳಿಯ ಬದುಕು ಬರೀ ಅವರು ಬಿಟ್ಟುಬಂದ ಬದುಕಲ್ಲ, ಅವರ ಭೂತದ ಬದುಕು. ಹಾಗಾಗಿಯೇ ಅವರ ವರ್ತಮಾನವನ್ನು, ವರ್ತಮಾನದ ಎಷ್ಟೋ ಸಮಸ್ಯೆಗಳನ್ನು, ಅದನ್ನು ಎದುರಿಸುವ ರೀತಿಗಳನ್ನು ನಿಯಂತ್ರಿಸುತ್ತಿರುವ ಬೀಜಗಳು ಹಳ್ಳಿಗಳಲ್ಲಿ ಇವೆ. ಆದರೆ ಬದುಕಿನ ಸಂದರ್ಭದಲ್ಲಿ ಅದನ್ನು ಅರ್ಥಮಾಡಿಕೊಳ್ಳುವುದು ಸುಲಭವಲ್ಲ. ಹಾಗಾಗಿಯೇ ಇವು ತಮ್ಮ ಕಾಲುಗಳನ್ನು ಭೂತದಲ್ಲಿ ಹುಗಿದುಕೊಂಡು, ಪರಿಹಾರಕ್ಕಾಗಿ ಆಕಾಶದತ್ತ ಮುಖಮಾಡಿ ನಿಂತಿರುವಂತೆ ಭಾಸವಾಗುತ್ತವೆ.

Reviews

There are no reviews yet.

Be the first to review “Kaju Biscuit”

Your email address will not be published. Required fields are marked *